

21st June 2025

ಬೆಳಗಾವಿ- ಶ್ರೀ ಪಂತನಗರ ರಹವಾಸಿಗಳ ಕ್ಷೇಮಾಭಿವೃದ್ಧಿ ಸಂಘ ಪಂತನಗರ ಮತ್ತು ಮಾಜಿ ಸೈನಿಕರ ಕಲ್ಯಾಣ ಸಂಘ ಪಂತನಗರ ಇವರ ಸಂಯೋಜನೆಯಲ್ಲಿ ಪಂತನಗರದ ರಾಧಾಕೃಷ್ಣ ಕಲ್ಯಾಣ ಮಂಟಪದಲ್ಲಿ ವಿಶ್ವ ಯೋಗ ದಿನ ಆಚರಿಸಲಾಯಿತು.
ಇನ್ನೂರಕ್ಕು ಹೆಚ್ಚು ಮಾಜಿ ಸೈನಿಕರು ಮತ್ತು ಪರಿವಾರದವರು ಹಾಗೂ ಹಿರಿಯನಾಗರಿಕರು ಭಾಗವಾಹಿಸಿ ಯೋಗಾಸನದ ಲಾಭ ಪಡೆದರು. ಈ ಕಾರ್ಯಕ್ರಮದಲ್ಲಿ ನಿವೃತ್ತ ಕೆ.ಎ.ಎಸ್ ಅಧಿಕಾರಿ ಮತ್ತು ಶ್ರೀ ಪಂತನಗರ ರಹವಾಸಿಗಳ ಕ್ಷೇಮಾಭಿವೃದ್ಧಿ ಸಂಘ ಪಂತನಗರ ಇದರ ಅಧ್ಯಕ್ಷ ರಾಮಪ್ಪ ಹಟ್ಟಿ ಮತ್ತು ನಿವೃತ್ತ ಆರಕ್ಷಕ ವೃತ್ತ ನಿರೀಕ್ಷಕರು , ಸಂಘದ ಉಪಾಧ್ಯಕ್ಷ ಶಂಕರಾನಂದ ಮದಿಹಳ್ಳಿಯವರು, ಭೀಮಸೇನ ತೇನಗಿ ಸೋಮಪ್ಪ ವ್ಯಾಪಾರಗಿ , ವಿಶ್ವನಾಥ ಮುನವಳ್ಳಿ, ಬಿ.ಕೆ. ನಾಗಪ್ಪಣ್ಣ ದಾಸ್ತಿಕೊಪ್ಪ, ಬಸವರಾಜ ವಕ್ಕುಂದ ಮತ್ತು ವೀರಭದ್ರ ಸುಭೆದಾರ, ಶ್ರೀ ಮತಿ ಲಲಿತಾ ಭಟ್ಟ, ಸವಿತಾ ಹಟ್ಟಿ, ಶ್ರೀದೇವಿ ಮದಿಹಳ್ಳಿ ಉಪಸ್ಥಿತರಿದ್ದರು.
ಯೋಗಾಸನ ಕಾರ್ಯಕ್ರಮವನ್ನು ಯೋಗ ಪಟು ಶ್ರೀ ಶ್ರೀಕಾಂತ ಪುಡಕಲಟ್ಟಿ ಗುರುಗಳು ನಡೆಸಿಕೊಟ್ಟರು. ರಾಜೇಶ ಸೊಗಲಿ ನಿರೂಪಿಸಿದರು. ಶಂಕಾರಾನಂದ ಮದಿಹಳ್ಳಿ ವಂದಿಸಿದರು.

ಸಾಮಾಜಿಕ ನಾಟಕಗಳನ್ನು ನೋಡಿ ಹೆಚ್ಚು ಪ್ರೋತ್ಸಾಹಿಸಿ : ಉಪನ್ಯಾಸಕ ಸಿಎಂ ಚನ್ನಬಸಯ್ಯಸ್ವಾಮಿ ಅಭಿಪ್ರಾಯ

ಶ್ರೀಶೈಲಗಿರಿ ಪ್ರಕಾಶನ ಬೆಳಗಾವಿ ರವರಿಂದ ಸಾಹಿತಿ ಬಿ.ಕೆ. ಮಲಾಬಾದಿಯವರ ಕೃತಿ ಲೋಕಾರ್ಪಣೆ - ಜೀವನದ ಆದರ್ಶಗಳನ್ನು ಒತ್ತಿ ಹೇಳುವ ಕೃತಿಗಳು ಎಲ್ಲರಿಗೂ ಮಾರ್ಗದರ್ಶಿ-- -ಎಸಿಪಿ ನಾರಾಯಣ ಬರಮನಿ ಅಭಿಮತ